News and Eventsಮಹಾಲಿಂಗಪುರ: ನೇಕಾರಬಂಧು ವತಿಯಿಂದ ಶಿಷ್ಯವೇತನ ವಿತರಣೆ

Ⓒ By, Nekarbandhu

ಮಹಾಲಿಂಗಪುರ: ನೇಕಾರಬಂಧು ವತಿಯಿಂದ ಶಿಷ್ಯವೇತನ ವಿತರಣೆ

ಮಹಾಲಿಂಗಪುರ: ಪ್ರತಿ ವರ್ಷದಂತೆ ಈ ವರ್ಷವೂ ಮಹಾಲಿಂಗಪುರ ದಸರಾ ವಿಜೃಂಭಣೆಯಿಂದ ನಡೆಯುತ್ತಿದೆ. 6 ನೇ ದಿನವಾದ ನಿನ್ನೆ(ಅಕ್ಟೋಬರ್ 1, 2022) ಕೂಡ, ದೇವಿ ಪುರಾಣ ಹಾಗು ಸಂಸ್ಕೃತಿಕ ಕಾರ್ಯಕ್ರಮಗಳು ಎಂದಿನಂತೆ ಅಚ್ಚುಕಟ್ಟಾಗಿ ನಡೆದವು. 

೬ ನೇ ದಿನವಾದ ನಿನ್ನೆ ನೇಕಾರಬಂಧು ವತಿಯಿಂದ ಶಿಷ್ಯವೇತನ ವಿತರಣೆಯನ್ನು ಶ್ರೀ ಬನಶಂಕರಿ ದೇವಸ್ಥಾನದಲ್ಲಿ ಹಮ್ಮಿಕೊಂಡಿದ್ದು ವಿಶೇಷವಾಗಿತ್ತು. ಈ ಸಂದರ್ಭದಲ್ಲಿ 10 ಜನ ಬಡ ವಿದ್ಯಾವಂತ ನೇಕಾರ ವಿದ್ಯಾರ್ಥಿಗಳಿಗೆ ನೇಕಾರಬಂಧು  ವತಿಯಿಂದ ಶಿಷ್ಯವೇತನವನ್ನು ನೀಡಲಾಯಿತು.
ಈ ಸಂದರ್ಭದಲ್ಲಿ ಸೌಜನ್ಯ ಕೈಮಗ್ಗ ಸೊಸೈಟಿಯ ಸ್ಥಾಪಕರಾದ ಶ್ರೀ G.S.ಗೊಂಬಿ ಅವರು ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದರು ಹಾಗು ನೇಕಾರಬಂಧುವಿನ ದ್ಯೆಯೊಧೇಶಗಳ ಬಗ್ಗೆ ಪ್ರಸ್ತಾವಿಸಿದರು. ಫಲಾನುಭವಿಗಳಿಗೆ ಶ್ರೀಗಳು ತಮ್ಮ ಅಮೃತ ಹಸ್ತದಿಂದ ಶಿಷ್ಯವೇತನವನ್ನು ನೀಡಿ ಆಶೀರ್ವದಿಸಿದರು
 
ಕಾರ್ಯಕ್ರಮದಲ್ಲಿ ಶ್ರೀ ಬನಶಂಕರಿ ಆಡಳಿತ ಮಂಡಳಿಯ ಸರ್ವ ಸದಸ್ಯರು, ಸಮಾಜದ ಗುರು ಹಿರಿಯರು ಹಾಗು ಸ್ಥಳೀಯ ಶಾಸಕರಾದ ಸನ್ಮಾನ್ಯ ಶ್ರೀ ಸಿದ್ದು ಸವದಿ (ತೇರದಾಳ ಮತಕ್ಷೇತ್ರ) ಅವರು ಭಾಗಿಯಾಗಿ ಕಾರ್ಯಕ್ರಮವನ್ನು ಯಶಸ್ವಿಗೊಳಿಸಲು ಸಹಕಾರಿಯಾದರು. ಈ ವಿಶೇಷ ಕಾರ್ಯಕ್ರಮ ನೆರೆದಿದ್ದ ಭಕ್ತಾದಿಗಳ ಮೆಚ್ಚುಗೆಗೆ ಪಾತ್ರವಾಯಿತು. 

News & Events

Bride and Grooms

Looking for Bride or Groom?

- Please Call us @ 6362030905 for any queries -