ಒಂದು ಏಡಿಯು ಅಡ್ಡ ಅಡ್ಡಾದ ತನ್ನ ವಿಚಿತ್ರ ನಡಿಗೆಯಲ್ಲಿ ನಡೆದಿತ್ತು. ದೇವನಿಗೆ ಅದರ ವಿಕೃತ ದೇಹವನ್ನು ಕಂಡು ಕನಿಕರವೆನಿಸಿತು. ಏಡಿಯ ಹತ್ತಿರ ಬಂದು “ಉಳಿದ ಎಲ್ಲ ಪ್ರಾಣಿಗಳಿಗೆ ನಾನು ಸೌಂದರ್ಯ ನೀಡಿದೆ. ನಿನಗೆ ಮಾತ್ರ ಸೌಂದರ್ಯ ನೀಡಲಿಲ್ಲ. ನಿನ್ನ ನೋಡಿ ಈಗ ನನಗೆ ಕರುಣೆ ಹುಟ್ಟಿದೆ. ಬೇಡು, ನಿನಗೆ ಎಂಥ ಸೌಂದರ್ಯ ಬೇಕು ಕೊಡುತ್ತೇನೆ !” ಎಂದು ದೇವನು ಹೇಳಿದ, ಏಡಿಯು ದೇವನೇ, “ನನ್ನ ದೇಹ, ಮತ್ತು ನಡಿಗೆ ಸುಂದರವಾಗಿಲ್ಲವೆಂದು ನಿನಗೆ ಹೇಳಿದವರಾರು? ನನ್ನಂತೆ ಮನುಷ್ಯನಿಗೂ ನಡೆಯಲು ಬರುವುದಿಲ್ಲ. ಇಂಥ ವಿಶಿಷ್ಟದೇಹ ನೀನೇ ನನಗೆ ನೀಡಿರುವಾಗ ನಾನೇಕೆ ಕುರೂಪಿ? ದೇಹದ ಸೌಂದರ್ಯ ಇರುವುದು ಉತ್ಸಾಹದಿಂದ ನಡೆಯುವುದರಲ್ಲಿ, ದುಡಿಯುವುದರಲ್ಲಿ ವಿನಹ ಬಣ್ಣದಲ್ಲಲ್ಲ”‘ ಎಂದು ಹೇಳಿತು. ಏಡಿಯ ಮಾತು ಕೇಳಿದ ಈಶ್ವರ ಅದರ ಸಂತೃಪ್ತ ಜೀವನವನ್ನು ಕಂಡು ಹೆಮ್ಮೆ ಪಟ್ಟನು.
🖊️ಸಂಗ್ರಹ🖋️
ಡಾ.ಈಶ್ವರಾನಂದ ಸ್ವಾಮೀಜಿ.
📞 – 9341137882.




