News and Eventsನವರಾತ್ರಿಯ ನಾಲ್ಕನೇ ದಿನ: ಕೂಷ್ಮಾಂಡಾ ದೇವಿಯ ಆರಾಧನೆ

Ⓒ By, Nekarbandhu

ನವರಾತ್ರಿಯ ನಾಲ್ಕನೇ ದಿನ: ಕೂಷ್ಮಾಂಡಾ ದೇವಿಯ ಆರಾಧನೆ

ನವರಾತ್ರಿಯೆಂದರೆ ದೇವಿಯ ನವರೂಪಗಳನ್ನು ಪೂಜಿಸುವುದು ಎಂದು ಅರ್ಥ. ಹಿಂದೂಗಳಿಗೆ ತುಂಬಾ ಪವಿತ್ರವಾಗಿರುವಂತಹ ಈ ಒಂಭತ್ತು ದಿನಗಳಲ್ಲಿ ದೇವಿಯ ಒಂದೊಂದು ರೂಪಕ್ಕೆ ಪೂಜೆ ಹಾಗೂ ಪುನಸ್ಕಾರ ಮಾಡಲಾಗುವುದು. ದೇವಿಯ ಭಕ್ತರು ಈ ಒಂಭತ್ತು ದಿನಗಳ ಕಾಲ ಉಪವಾಸ ಕೂಡ ಮಾಡುವರು.

ನವರಾತ್ರಿಯ ನಾಲ್ಕನೇ ದಿನದಂದು ತಾಯಿ ಕೂಷ್ಮಾಂಡಾರನ್ನು ಪೂಜಿಸಲಾಗುವುದು. ಕೂಷ್ಮಾಂಡಾವೆಂದರೆ ಭೂಮಿಯನ್ನು ಸೃಷ್ಟಿಸಿದ ದೇವಿ ಎಂದರ್ಥ. ಸಿಂಹರೂಪಿಣಿಯಾಗಿರುವ ದೇವಿಗೆ ಎಂಟು ಹಸ್ತುಗಳಿದ್ದು, ಇದರಲ್ಲಿ ಏಳರಲ್ಲಿ ಆಯುಧಗಳಿವೆ ಮತ್ತು ಒಂದರಲ್ಲಿ ಜಪಮಾಲೆ.

ಕೂಷ್ಮಾಂಡಾ ದೇವಿಯ ಕಥೆ ಕೂಷ್ಮಾಂಡಾ ದೇವಿಯನ್ನು ಆದಿಶಕ್ತಿಯೆಂದು ಕರೆಯಲಾಗುವುದು. ಯಾಕೆಂದರೆ ಭೂಮಿಯ ಸೃಷ್ಟಿಕರ್ತೆಯೇ ಆಕೆ ಎನ್ನಲಾಗುತ್ತದೆ. ಆಕೆ ಸೂರ್ಯದೇವರ ವಾಸಸ್ಥಾನದಲ್ಲಿ ವಾಸಿಸುವ ಕಾರಣದಿಂದಾಗಿ ಭೂಮಿ ಮೇಲಿರುವ ಎಲ್ಲಾ ಅಂಧಕಾರವನ್ನು ನಿವಾರಣೆ ಮಾಡುವಳು. ಕೂಷ್ಮಾಂಡಾ ದೇವಿಯು ಮೊದಲ ಮೊಟ್ಟೆಯನ್ನು ಸೃಷ್ಟಿಸಿ, ಅದರಿಂದ ಸಂಪೂರ್ಣ ಜೀವಸಂಕುಲಗಳಿಗೆ ಜೀವ ನೀಡಿದರು ಎನ್ನುವ ಪ್ರತೀತಿ ಇದೆ. ಈ ದೇವಿಯು ಸೂರ್ಯನಿಗೆ ಬೆಳಕು ನೀಡುವರು. ಆಕೆಯ ನಗು ಜೀವನದಲ್ಲಿ ಧನಾತ್ಮಕತೆ ಉಂಟು ಮಾಡುವುದು, ಶಕ್ತಿ ನೀಡಿ ಎಲ್ಲಾ ರೀತಿಯಿಂದಲೂ ಒಳ್ಳೆಯದನ್ನು ಮಾಡುವುದು.

ಕೂಷ್ಮಾಂಡಾ ದೇವಿಯ ಮಹತ್ವ ಕೂಷ್ಮಾಂಡಾ ದೇವಿಯು ಸೂರ್ಯ ದೇವನಿಗೆ ಬೆಳಕನ್ನು ನೀಡುವರು. ಆಕೆ ಸೂರ್ಯನಿಗೂ ಅಧಿಪತಿಯಾಗಿರುವ ಕಾರಣದಿಂದಾಗಿ ಕೂಷ್ಮಾಂಡಾ ದೇವಿಯನ್ನು ಪೂಜಿಸುವುದರಿಂದಾಗಿ ನಿಮ್ಮ ಜಾತಕದಲ್ಲಿ ಸೂರ್ಯನಿಂದಾಗಿರುವ ಕೆಡುಕನ್ನು ನಿವಾರಣೆ ಮಾಡಬಹುದು. ಇದರೊಂದಿಗೆ ಕೂಷ್ಮಾಂಡಾ ದೇವಿಯ ಪೂಜಿಸುವ ಜನರು ಎಲ್ಲಾ ರೀತಿಯ ಸಮಸ್ಯೆಗಳಿಂದ ಪರಿಹಾರ ಮತ್ತು ಸಮಾಜದಲ್ಲಿ ಪ್ರಸಿದ್ಧಿ ಪಡೆಯುವರು.

ನಾಲ್ಕನೇ ದಿನದಂದು ಕೂಷ್ಮಾಂಡಾ ದೇವಿಯ ಪೂಜೆ ಕೂಷ್ಮಾಂಡಾ ದೇವಿಯ ಪೂಜೆಗೆ ಕೆಂಪು ಬಣ್ಣದ ಹೂಗಳನ್ನು ಬಳಸಿದರೆ ತುಂಬಾ ಒಳ್ಳೆಯದು. ನಾಲ್ಕನೇ ದಿನದಂದು ಕೂಷ್ಮಾಂಡಾ ದೇವಿಯ ಪೂಜೆ ಮಾಡಬೇಕು. ಕೂಷ್ಮಾಂಡಾ ದೇವಿಯ ಕಾಂತಿಯುತ ರೂಪದ ಬಗ್ಗೆ ಚಿಂತಿಸಿ ಮತ್ತು ಶೋಡಷಚೋಪಚಾರ ಪೂಜೆ ಮಾಡಿ. ಕುಟುಂಬದ ಸಮೃದ್ಧಿ ಮತ್ತು ಸಮಾಜದಲ್ಲಿ ಒಳ್ಳೆಯ ಸ್ಥಾನಮಾನ ಪಡೆಯಲು ಪ್ರಾರ್ಥಿಸಿ ಮತ್ತು ಆರತಿಯೊಂದಿಗೆ ಪೂಜೆ ಕೊನೆಗೊಳಿಸಿ.

ನಾಲ್ಕನೇ ದಿನಕ್ಕೆ ಕೂಷ್ಮಾಂಡಾ ದೇವಿಯ ಮಂತ್ರ

ಓಂ ದೇವಿ ಕುಶ್ಮಾಂದೈ ನಮಃ

ಓಂ ದೇವಿ ಕುಶ್ಮಾಂದಾಯ್ಯೆ ನಮಃ ಸುರಸಂಪುರ್ನ ಕಲಾಶಂ ರುದ್ರರಾಪ್ಲುಮಾಮೇವ್ ಚಾ

ದಾಧಾನಾ ಹಸ್ತಪದ್ಮಾಭಯಂ ಕುಶ್ಮಾಂದ ಶುಭದಾತ ಮಿ

ನಾಲ್ಕನೇ ದಿನದ ಪೂಜೆಯ ಮಹತ್ವ ನಾಲ್ಕನೇ ದಿನದಂದು ಕೂಷ್ಮಾಂಡಾ ದೇವಿಯ ಪೂಜೆ ಮಾಡುವುದರಿಂದ ಎಲ್ಲಾ ರೀತಿಯ ಕಾಯಿಲೆಗಳು ದೂರವಾಗುವುದು ಮತ್ತು ಒಳ್ಳೆಯ ಆರೋಗ್ಯ ಸಿಗುವುದು. ವೈಯಕ್ತಿಕ ಪ್ರಗತಿಯಲ್ಲಿ ಇದು ತಂದೆ, ಸೋದರ, ಸೋದರಿ ಹಾಗೂ ಉದ್ಯೋಗದ ಕಡೆ ಹಿರಿಯರೊಂದಿಗೆ ಸಂಬಂಧವನ್ನು ಉತ್ತಮಪಡಿಸುವುದು. ಸಮಾಜದಲ್ಲಿ ಒಳ್ಳೆಯ ಸ್ಥಾನಮಾನ ಸಿಗುವುದರೊಂದಿಗೆ ಒಳ್ಳೆಯ ಗುರಿ ಹಾಗೂ ಸ್ವತಂತ್ರವು ಸಿಗುವುದು. ನಾಲ್ಕನೇ ದಿನದ ಪೂಜೆ ಲಕ್ಷ್ಮೀ ಪೂಜೆಯ ಆರಂಭವಾಗಿದ್ದು, ಇದು ಮುಂದಿನ ಮೂರು ದಿನಗಳ ಕಾಲ ನಡೆಯಲಿದೆ.

Content Credit: kannada.boldsky.com

News & Events

Bride and Grooms

Looking for Bride or Groom?

- Please Call us @ 6362030905 for any queries -