ಮಹಾಲಿಂಗಪೂರ : ಕಳೆದೆರಡು ವರ್ಷಗಳಲ್ಲಿ ಕೊರೊನಾ ಬೀಗಿ ನಿಯಮಗಳಿಂದಾಗಿ ಮಂಕಾಗಿದ್ದ, ನವರಾತ್ರಿ ಉತ್ಸವವು ಅಮೃತ ಮಹೋತ್ಸವ ವಿಷಯವನ್ನೋಳಗೊಂಡಂತೆ ಇಲಾಖೆಯ ಅನುಮತಿಯಂತೆ ಪ್ರಸ್ತುತ ವರ್ಷದಲ್ಲಿ ಸಂಭ್ರಮದಿಂದ ಜರುಗಿಸಲು ಸ್ಥಳೀಯ ಬನಶಂಕರಿದೇವಿ ದೇವಸ್ಥಾನ ಆಡಳಿತಮಂಡಳಿ ನಿರ್ಧರಿಸಿದೆ.
ಕಾರ್ಯಕ್ರಮವು ಸೆ.26ರಿಂದ ಅ.4ರವರೆಗೆ ಜರುಗಲಿದ್ದು, ಸಹಜಾನಂದ ಶ್ರೀಗಳು ಸಾನಿಧ್ಯ ವಹಿಸಲಿದ್ದಾರೆ. ವಿಶೇಷ ಅತಿಥಿಗಳಾಗಿ ಅಕ್ಕಲಕೋಟ ಚಿಕ್ಕರೇವಣಸಿದ್ಧ ಶರಣರು ಆಗಮಿಸಲಿದ್ದಾರೆ.
ಪ್ರತಿದಿನ ಸಂಜೆ 7ರಿಂದ8 ಗಂಟೆವರೆಗೆ ರನ್ನಬೆಳಗಲಿಯ ಮಹಾಲಿಂಗ ಶಾಸ್ತ್ರೀಗಳಿಂದ ದೇವಿ ಪುರಾಣ ನಡೆಯಲಿದೆ. ಸೆ.26ರಂದು ಸ್ವಾತಂತ್ರ್ಯದ ಅಮೃತ ಮಹೋತ್ಸವ ಅಂಗವಾಗಿ ಶಾಲಾ ಮಕ್ಕಳೀಂದ ಸಾಂಸ್ಕøತಿಕ ಕಾರ್ಯಕ್ರಮ, ಸೆ.27ರಂದು ತತ್ವಪದ ಜನಪದ ರಂಗಗೀತೆ, ಸೆ.28ರಂದು ಖ್ಯಾತ ಗಾಯಕರಿಂದ ಸಂಗೀತ ಸಂಜೆ, ಸೆ.29ರಂದು ಹಾಸ್ಯ ಸಂಜೆ, ಸೆ.30ರಂದು ಗೊಂಬೆ ಆಟ ಮತ್ತು ಸಂಸ್ಕøತಿ ನೃತ್ಯ, ಅ.1 ರಂದು ಸುಗಮ ಸಂಗೀತ, ಅ.2 ರಂದು ನೃತ್ಯ, ಅ.3 ರಂದು ರವೀಂದ್ರ ಸೋರಗಾಂವಿ ಅವರಿಂದ ಸುಗಮ ಸಂಗೀತ, ಅ. 4 ರಂದು ನೃತ್ಯ ಮತ್ತು ಗಾಯನ ಕಾರ್ಯಕ್ರಮಗಳು ಜರುಗಲಿವೆ.
ಸೆ.27 ರಿಂದ ಅ.4 ರವರೆಗೆ ಬನಶಂಕರಿದೇವಿಗೆ ಕುಂಕುಮಾರ್ಚನೆ, ಸೆ.30 ಶುಕ್ರವಾರದಂದು ಉಡಿತುಂಬುವ ಕಾರ್ಯಕ್ರಮ ಹಾಗೂ ಪ್ರತಿದಿನ ಪ್ರಸಾದ ವ್ಯವಸ್ಥೆಯನ್ನು ಮಾಡಲಾಗಿದ್ದು, ಬಹಳಷ್ಟು ಸಂಭ್ರಮ ಸಡಗರದಿಂದ ಆಚರಿಸಲಾಗುವುದು.
ತಾವೆಲ್ಲರೂ ಕುಟುಂಬ ಸಮೇತರಾಗಿ ಬಂದು ದೇವಿಯ ಆಶೀರ್ವಾದ ಪಡೆದುಕೊಂಡು ಪುನೀತರಾಗಬೆಂಕೆಂದು ವಿನಂತಿಸಿಕೊಳ್ಳುತ್ತೇವೆ.
-ಸ್ವಾಗತ ಕೋರುವವರು
ಶ್ರೀ ಬನಶಂಕರಿ ಟ್ರಸ್ಟ್ ಕಮೀಟೀ, ಶ್ರೀ ಬನಶಂಕರಿ ಯುವಕ ಮಂಡಳಿ, ನೇಕಾರಬಂಧು ತಂಡ ಮತ್ತು ಮಹಾಲಿಂಗಪುರ ಸಮಸ್ತ ಜನತೆ.





