ರಾಷ್ಟ್ರಮಟ್ಟದ ನೇಕಾರರ ಬೃಹತ್ ಸಮಾವೇಶ 2022 ರ ಹಿನ್ನಲೆಯಲ್ಲಿ ಕರ್ನಾಟಕ ರಾಜ್ಯ ನೇಕಾರ ಸೇವಾ ಸಂಘದ ನೇತೃತ್ವದಲ್ಲಿ ದಿನಾಂಕ 05-06-2022ರಂದು ಬಾಗಲಕೋಟೆ ಜಿಲ್ಲೆ ಬಾದಾಮಿ ಯಲ್ಲಿ ರಾಜ್ಯ ನೇಕಾರರ ಸಮಾವೇಶವನ್ನು ಹಮ್ಮಿಕೊಳ್ಳಲಾಗಿದೆ.
ಸ್ವಾಭಿಮಾನದ ನೇಕಾರರ ಹೋರಾಟಗಳ ಇನ್ನೊಂದು ಸ್ವರೂಪವೇ “ಬ್ರಹತ್ ರಾಷ್ಟ್ರಮಟ್ಟದ ಸಮಾವೇಶ ” ಒಂದು ಲಕ್ಷ ಜನರನ್ನು ಸೇರಿಸುವ ಪ್ರಯತ್ನ ಪ್ರತಿಯೊಬ್ಬರೂ ನೀಡುವ ಸಹಕಾರ ರಥಯಾತ್ರೆಯ ಸ್ವಾಗತಕ್ಕೆ ಸಂಭ್ರಮದ ಸ್ವಾಗತ ಹಾಗೂ ಕು ಪೂಜಾ ಪಾಟೀಲ ಟ್ರಷ್ಟನಿಂದ ಎರಡು ಲಕ್ಷ ರೂಪಾಯಿಗಳ ಧನಸಹಾಯ ಮಾಡಿರುವುದು ಇನ್ನೂ ಅನೇಕರು ಧನಸಹಾಯ ಮಾಡುತ್ತಿರುವುದು ನೇಕಾರರು ನಾವು ಪ್ರತೀ ಮಗ್ಗಕ್ಕೆ ಹತ್ತು ರೂಪಾಯಿನಾದರೂ ಸಮಾವೇಶದ ಖರ್ಚಿಗೆ ಕೊಟ್ಟೆ ಕೊಡುತ್ತೇವೆ ಎಂದು ಸ್ಪೂರ್ತಿ ನೀಡಿದ್ದಾರೆ ಶಾಮಿಯಾನ, ವೇದಿಕೆ ನಿರ್ಮಾಣ, ಊಟ ತಿಂಡಿ , ವಸತಿ , ರಾಜ್ಯದಾದ್ಯಂತ ಭೇಟಿ ಸರ್ವರ್ ಪ್ರೋತ್ಸಾಹ ಯಶಸ್ಸಿಗೆ ಕೈ ಜೋಡಿಸುತ್ತಾ ಬಸ್ ಗಳ ವ್ಯವಸ್ಥೆ ಮಾಡುತ್ತಿರುವ ಎಲ್ಲರಿಗೂ ಧನ್ಯವಾದಗಳು ತಾವುಗಳು ಬನ್ನಿ.

















